Thank you message


Saturday, 1 July 2017

ಸರಿಸು ಬಾ ನೀನೊಮ್ಮೆ ವಿರಹದ ಪರದಿಯನು...

ಸರಿಸು ಬಾ ನೀನೊಮ್ಮೆ ವಿರಹದ ಪರದಿಯನು 
ಓದು ಬಾ ಮೇಘವೇ ನನ್ನ ಮನದ ವರದಿಯನು 

ನಿನ್ನ ನೆನಪು ಕೆಡಿಸಿದೆ ನನ್ನಯ ಇರುಳ ನಿದ್ರೆಯನು 
ಮಾಡಿರುವೆ ನಿನಗಾಗಿ ಒಲವಿನ ಉಡುಗೊರೆಯ ಕರದಿಯನು 
ನಿನ್ನಯ ಭೇಟಿಗೆ ಬೇಗ ಕಳಿಸು ನನ್ನ ಸರದಿಯನು 

ಮನಸಿಂದು ಬೆನ್ನಹತ್ತಿದೆ ಪ್ರಣಯದ ಕುದುರೆಯನು 
ಸೃಷ್ಟಿಯೆ ಆಡಿಸುತಿರುವುದು ಪ್ರೀತಿಯ ಬುಗುರಿಯನು 
ಕಲ್ಪಿಸಲಾರೆ ನೀನಿಲ್ಲದ ಪ್ರೇಮದ ನಗರಿಯನು 

                                      ಶಿವಪ್ರಸಾದ ಮಿಣಜಿಗಿ