Thank you message


Saturday, 17 June 2017

ಪ್ರೀತಿಸುವೆ ನಾ ನಿನ್ನ ಕೊನೆಯ ಉಸಿರಿರುವ ತನಕ...

ಪ್ರೀತಿಸುವೆ ನಾ ನಿನ್ನ ಕೊನೆಯ ಉಸಿರಿರುವ ತನಕ 
ನೀನೆ ನನ್ನ ಬಾಳಿಗೆ ಬೆಲೆಕಟ್ಟಲಾಗದ ಕನಕ 

ಬರಿ ದಾರಿಯ ನಾ ನೋಡುವೆನು ನಿ ಕಾಣುವವರೆಗೆ 
ನಿನ್ನ ಹಿಂದೆ ನಾ ಸುತ್ತುವೆನು ತಿರುಗಿ ನಿ ನೋಡುವವರೆಗೆ 
ಖಾಲಿ ಹಾಳೆಯಲಿ ಗೀಚುತಲಿರುವೆನು ನಿನ್ನ ಚಿತ್ರ ಮೂಡುವವರೆಗೆ 

ಕನಸಲಿ ಕಾಡುವೆನು ನನ್ನ ಹೆಸರ ನಿ ಹೇಳುವವರೆಗೆ 
ಮನಸಾರೆ ನಾ ಬೇಡುವೆನು ನಿ ಪ್ರೀತಿ ಭಿಕ್ಷೆ ನೀಡುವವರೆಗೆ
ಕೋಗಿಲೆಯಂತೆ ಕಾಯುವೆನು ಪ್ರೀತಿಯ ವಸಂತ ಕಾಲ ಬರುವವರೆಗೆ   

                                                           ಶಿವಪ್ರಸಾದ ಮಿಣಜಿಗಿ