Thank you message


Saturday, 3 June 2017

ದಿಂಬಿಗೆ ನಿನ್ನ ಚಿತ್ರವಿರಲು ನಿದ್ದೆ ಯಾಕೆ ಬೇಕು...

ದಿಂಬಿಗೆ ನಿನ್ನ ಚಿತ್ರವಿರಲು ನಿದ್ದೆ ಯಾಕೆ ಬೇಕು 
ಹುಣ್ಣಿಮೆ ಬೆಳದಿಂಗಳಲಿ ನಿನ್ನ ನೆನಪೊಂದೆ ಸಾಕು 

ತುಂಬು ಮರಭೂಮಿಯಲಿ ಮಾನ್ಸೂನ ಮಳೆ ಸುರಿದ ಹಾಗೆ 
ಹೇಳದೆ ಕೇಳದೆ ಹೃದಯದ ಬಡಿತ ಹೆಚ್ಚಾಗಿರುವುದು ಹೇಗೆ 
ನಿನ್ನಿಂದ ಮನಸಿನ ಭಾವನೆಗಳ ನಡುವೆ ನೆಡೆಯುತಿದೆ ಕಾಳಗ ಆಗಾಗ್ಗೆ

ನಿನ್ನ ನೋಡುತ ಎದುರಿರುವ ಕಂಬಕೆ ಡಿಕ್ಕಿ ಹೊಡೆದಿರುಹುದು ಉಂಟು 
ನಾನರಿಯನು ನನ್ನ ನಿನ್ನ ಸಂಭಂದವು ಯಾವಾ ಜನ್ಮದ ನಂಟು 
ಸದಾ ಬೆಸೆದಿರಲಿ ಜನ್ಮಜನ್ಮಕೂ ನಮ್ಮಿಬ್ಬರ ಬ್ರಹ್ಮಗಂಟು 

                                           ಶಿವಪ್ರಸಾದ ಮಿಣಜಿಗಿ