Thank you message


Saturday, 20 May 2017

ವಸಂತದ ಚಿಗುರಿಲ್ಲದೆ ಕೋಗಿಲೆಯು ಹಾಡನು ಹಾಡದು..

ವಸಂತದ ಚಿಗುರಿಲ್ಲದೆ ಕೋಗಿಲೆಯು ಹಾಡನು ಹಾಡದು 
ನೀನಿಲ್ಲದ ಪ್ರಪಂಚವ ಇ ಹೃದಯ ಎಂದೂ ಬೇಡದು 

ಪ್ರೀತಿ ತೀರವ ಬಿಟ್ಟು ಸಾಗರವು ಎಂದೂ ಇರದು 
ಒಲವಿನ ಎರಡು ರೆಕ್ಕೆಗಳಿಲ್ಲಗೆ ಹಕ್ಕಿಯು ಎಂದೂ ಹಾರದು
ಒಮ್ಮೆ ಹಚ್ಚಿದ ಪ್ರೀತಿಯ ಜ್ಯೋತಿಯು ಜನ್ಮ ಜನ್ಮಕೂ ಆರದು  

ಮನಸುಗಳ ಸಮ್ಮಿಲನಕೆ ಯಾವ ವೆಚ್ಚವೂ ತಾಗದು 
ಪ್ರೀತಿ ಸ್ನೇಹದ ಪದಗಳಿಲ್ಲದೆ ಜಗವು ಮುಂದೆ ಸಾಗದು 
ಎಷ್ಟೇ ಪ್ರೀತಿಯ ಔಷಧ ಕುಡಿದರು ನಿನ್ನ ಹುಚ್ಚು ಹೋಗದು 

                                        ಶಿವಪ್ರಸಾದ ಮಿಣಜಿಗಿ