Thank you message


Saturday, 13 May 2017

ಹಗಲಿರುಳು ಕಾಡಿದೆ ನಿನ್ನ ನಗುವಿನ ನೆನಪು...

ಹಗಲಿರುಳು ಕಾಡಿದೆ ನಿನ್ನ ನಗುವಿನ ನೆನಪು 
ನಿದ್ದೆಗಣ್ಣಲೂ ಮರೆಯಲಾರೆ ಆ ನಿನ್ನ ಕಣ್ಣ ಹೊಳಪು 

ಎಲ್ಲಿ ಹೋಗಿ ಕುಳಿತರೂ ನಿನ್ನದೇ ನೆನಪುಗಳ ಧ್ಯಾನ 
ಪ್ರೀತಿಯ ಪೂಜೆಗೆ ಬೇಕಿಲ್ಲ ಮಡಿ ಮುಟ್ಟಿನ ಸ್ನಾನ 
ಪ್ರೀತಿಯಲಿ ಬೀಳಲು ಹೃದಯಕೆ ಬೇಡ ಯಾವ ಗ್ರಂಥಗಳ ಜ್ಞಾನ 

ನಿನೊಮ್ಮೆ ನಕ್ಕರೆ ಬದುಕೆಲ್ಲ ಕಾಮನಬಿಲ್ಲಿನ ಬಣ್ಣ 
ನಾನೆಂದು ಮರೆಯನು ಮಿಟುಕದೆ ನೋಡುವ ಆ ನಿನ್ನ ಕಣ್ಣ 
ನಿನ್ನ ಪ್ರತಿ ನೋಟವೇ ಕೊಲ್ಲುತಿದೆ ಕ್ಷಣ ಕ್ಷಣ ನನ್ನ 

                                           ಶಿವಪ್ರಸಾದ ಮಿಣಜಿಗಿ