Thank you message


Saturday, 6 May 2017

ನೀನೆ ನನ್ನ ಮನಸಿನ ಭಾವನೆಗಳ ಬಿಂಬಿಸುವ ಕನ್ನಡಿ...

ನೀನೆ ನನ್ನ ಮನಸಿನ ಭಾವನೆಗಳ ಬಿಂಬಿಸುವ ಕನ್ನಡಿ 
ನಿನ್ನ ಒಲವಿನ ಮಾತುಗಳೆ ನನ್ನ ಬಾಳ ಪುಸ್ತಕಕೆ ಮುನ್ನುಡಿ 

ನಿನ್ನ ಕನಸಿನ ಕನವರಿಕೆಗಳೆ ನನಗೆ ನಾಣ್ಣುಡಿ 
ಪ್ರತಿ ಮುಂಜಾವಿನ ಅಮೃತವಾಣಿಯು ನಿನ್ನಯ ನುಡಿ 
ಪ್ರೀತಿಯ ನಡಿಗೆಯಲಿ ಜಾರಿ ಬೀಳುತಿರಲು ನೀ ನನ್ನ ಕೈಹಿಡಿ 

ಪ್ರೀತಿಯ ಪ್ರಪಂಚಕೆ ನಾ ಕಾಣೆನು ಯಾವುದೆ ಗಡಿ 
ಇ ನನ್ನ ಕೈ ಇಂದ ಮಲ್ಲಿಗೆಯ ನೀನೊಮ್ಮೆ ಮುಡಿ 
ಪ್ರೇಮಿಗೆ ಪ್ರೇಯಸಿಯ ಹೃದಯವೆ ದೇವರ ಗುಡಿ 

                                         ಶಿವಪ್ರಸಾದ ಮಿಣಜಿಗಿ