ಜೀವನವು ಏನೂ ಗೀಚದ ಖಾಲಿ ಪುಟಗಳ ಪುಸ್ತಕ
ಅದನು ಬಣ್ಣದಿಂದ ತುಂಬಿಸಲು ಬಳಸು ನಿನ್ನ ಮಸ್ತಕ
ಪುಸ್ತಕದ ಪ್ರತಿ ಪುಟಗಳ ತಿರುವಿಗೂ ನೀನಾಗು ಉತ್ಸುಕ
ಬಾಳ ಪುಟಗಳಲಿ ಬರೆಯುವ ಬರವಣಿಗೆಯೆ ಕೌತುಕ
ಪ್ರತಿ ಹೆಜ್ಜೆಯಲೂ ಪರಿಶುದ್ಧದ ಬಿಂಬದಂತಿರಲಿ ನಿನ್ನ ಮುಖ
ಬೇರೆಯವರ ಜೀವನದ ಪುಟಗಳನು ನಕಲು ನಿ ಮಾಡಬೇಡ
ಪ್ರತಿ ಪುಟಗಳಲಿ ಹೊಸತನವ ಚಿತ್ರಿಸುವುದನು ಬಿಡಬೇಡ
ಪ್ರತಿ ಚಿತ್ರಕೂ ಹೊಸದೊಂದು ಬಣ್ಣ ಹಚ್ಚುವುದನು ಮರೆಯಬೇಡ
ಶಿವಪ್ರಸಾದ ಮಿಣಜಿಗಿ