Thank you message


Saturday, 22 April 2017

ಸಾಗಿದೆ ಸರಸಗಳ ಒಲವಿನ ಪ್ರೀತಿಯ ಆಲಾಪವು...

ಸಾಗಿದೆ ಸರಸಗಳ ಒಲವಿನ ಪ್ರೀತಿಯ ಆಲಾಪವು 
ಮುದ್ದು ಮನಸುಗಳ ಕಚಗುಳಿ ಇಡುವ ಸಲ್ಲಾಪವು 

ನನ್ನ ಇಡೀ ಜೀವನವೆ ನಿನ್ನ ಪ್ರೀತಿಯ ಅಧ್ಯಾಯ 
ನಿ ನನಗೆ ಸಿಗದಿದ್ದರೆ ಅದುವೇ ಘೋರ ಅನ್ಯಾಯ 
ಪ್ರೀತಿಯ ನ್ಯಾಯಾಲಯದಿ ನಿನ್ನ ಹೇಳಿಕೆಗಳದೆ ನ್ಯಾಯ 

ನೀನಿರದೆ ದಿನವು ನಾ ಕುಡಿಯುತಿರುವೆ ವಿರಹದ ಕಷಾಯ 
ನಿ ನನ್ನ ಸನಿಹಕೆ ಇರುವುದೆ ಇದಕೆ ಇರುವ ಪರ್ಯಾಯ 
ನಿ ಬಂದು ಒದಗಿಸಬಾರದೆ ನನ್ನ ಮನಕೆ ಪ್ರೀತಿಯ ನ್ಯಾಯ 

                                               ಶಿವಪ್ರಸಾದ ಮಿಣಜಿಗಿ