ನೀನಿರುವ ಪ್ರಪಂಚವೇ ನನ್ನ ಪಾಲಿಗೆ ಸ್ವದೇಶ
ನೀನಿರಲು ಜೊತೆಗೆ ಹಚ್ಚಹಸಿರಿನ ಮಲೆನಾಡು ಆ ಪ್ರದೇಶ
ಪ್ರೀತಿಯ ಆಡಳಿತದಲಿ ಸದಾ ಪಾಲಿಸುವೆ ನಿನ್ನಯ ಆದೇಶ
ಕಣ್ಣೋಟದ ಅಂಚೆಯಲಿ ಕಳುಹಿಸಿದೆನು ಪ್ರೇಮ ಸಂದೇಶ
ಇಗಲೂ ಅರ್ಥವಾಗದೆ ನಿನಗೆ ನನ್ನ ಮನದ ಉದ್ದೇಶ
ನಮ್ಮಿಬ್ಬರ ಪ್ರೀತಿಯು ಮಿತಿಯೇ ಇಲ್ಲದ ಆಕಾಶ
ಸಾಗರದ ಆಳದಿ ಹೊಳೆಯುವ ಸ್ವಾತಿ ಮುತ್ತಿನಂಥಾ ಪ್ರಕಾಶ
ಸಿಕ್ಕಿದೆ ನನಗೆ ಇ ಜನುಮದಿ ನಿನ್ನ ಪ್ರೀತಿ ಪಡೆಯುವ ಅವಕಾಶ
ಶಿವಪ್ರಸಾದ ಮಿಣಜಿಗಿ