ಪ್ರೀತಿಯ ಜಾತ್ರೆಯಲಿ ನಮ್ಮ ಹೃದಯಗಳ ಮೆರವಣಿಗೆ
ನನ್ನ ಕವನಗಳ ತುಂಬೆಲ್ಲಾ ನಿನ್ನ ನೆನಪುಗಳ ಬರವಣಿಗೆ
ನಿನ್ನ ನೀಳ ಜಡೆಯ ಬಾಚುವ ನನ್ನ ಬೆರಳುಗಳ ಹಣಿಗೆ
ಕೊರವಂಜಿಯ ಹಾಡು ಬೇಕಿಲ್ಲ ನಮ್ಮಿಬ್ಬರ ಕಣಿಗೆ
ಮುಂಜಾನೆಯ ನಿನ್ನ ಸ್ವಪ್ನಗಳು ತೆರಿಗೆ ಇಲ್ಲದ ದೇಣಿಗೆ
ನಿನ್ನಿಂದಲೇ ಶೋಭೆ ಬಂದಿದೆ ಕೊರಳ ಮುತ್ತಿನ ಮಣಿಗೆ
ನಿನಗಿಂತ ಸಾಟಿಯಾರು ಆ ಕೋಲಾರದ ಚಿನ್ನದ ಗಣಿಗೆ
ಎಲ್ಲೇ ಇದ್ದರೂ ನನ್ನ ಹೃದಯ ಕಿವಿಗೊಡುಹುದು ನಿನ್ನಯ ದನಿಗೆ
ಶಿವಪ್ರಸಾದ ಮಿಣಜಿಗಿ