Thank you message


Saturday, 11 February 2017

ಓ ಜೀವವೇ ನಿನಗೆಷ್ಟು ಸಹಿಸಲಾಗದ ತೊಂದರೆ...

ಓ ಜೀವವೇ ನಿನಗೆಷ್ಟು ಸಹಿಸಲಾಗದ ತೊಂದರೆ 
ಕಡಿಮೆಯಾದಿತೇ ನಿನ್ನ ತೊಂದರೆ ದೇವರು ಧರೆಗೆ ಬಂದರೆ 

ಕುಡಿದು ರೋಡಲಿ ಮಲಗಿದ ದೇಹದಲೂ ನಿನ್ನಯ ಉಪಸ್ಥಿತಿ 
ನರಳು ತಿರುವ ದೇಹದಲೂ ನೀನೆ ಬೇಕು ಎಂತಹದೇ ಆದರೂ ಆ ಪರಸ್ಥಿತಿ 
ಯಾಕೆ ಇ ಮನುಜನಿಗೆ ತಿಳಿದಿಲ್ಲ ನಿನ್ನ ಇ ಅಮೂಲ್ಯವಾದ ಸಂಗತಿ 

ಕೊನೆಯ ಉಸಿರಿರುವವರೆಗೆ ನೀನೆ ತಾನೇ ದೇಹಕೆ ಅಧಿಪತಿ 
ನೀನೆ ನಮ್ಮ ಬಾಳಲಿ ಬೆಲೆ ಕಟ್ಟಲಾಗದ ಸಂಪತಿ 
ಜೀವ ಮತ್ತು ಉಸಿರು ಇಗಲೂ ಸತಿಸಹಗಮನ ಪದ್ಧತಿ ಪಾಲಿಸುವ ದಂಪತಿ 

                                                                                   ಶಿವಪ್ರಸಾದ ಮಿಣಜಿಗಿ