Thank you message


Saturday, 4 February 2017

ಯಾರಿಗೂ ಬಿಟ್ಟಿಲ್ಲಾ ಹೆಣ್ಣು ಹೊನ್ನು ಮಣ್ಣಿನ ಮಾಯೆ...

ಯಾರಿಗೂ ಬಿಟ್ಟಿಲ್ಲಾ ಹೆಣ್ಣು ಹೊನ್ನು ಮಣ್ಣಿನ ಮಾಯೆ 
ಜೀವನದಲಿ ಒಮ್ಮೆಯಾದರೊ ಬಿದ್ದಿರಲೇ ಬೇಕು ಇದರ ಛಾಯೆ 

ಋಷಿ ಮುನಿಗಳಿಗೂ ಬಿಟ್ಟಿಲ್ಲ ಇ ಮೂರು ವಿಧಿಗಳು 
ನರಮಾನವನಿಗೆ ಇವು ಮೂರು ಬಾಳ ನಿಧಿಗಳು 
ದೇವರಿಗೆ ಮಾತ್ರ ತಿಳಿದಿದೆ ಇವುಗಳ ವಿಧಿ ವಿಧಾನಗಳು 

ಇವುಗಳ ಒಡನಾಟವಿಲ್ಲದೆ ಬದುಕಲಾರನು ನರ ಮಾನವ
ಇವುಗಳ ಮೌಲ್ಯವ ಅರ್ಥೈಸಿಕೊಂಡು ಬದುಕುವವನೇ ದಾನವ 
 ಇವುಗಳಿಲ್ಲದೆ ಪೂರ್ತಿಯಾಗದು ನಮ್ಮ ಬಾಳಿನ ಯಾನವ 

                                                        ಶಿವಪ್ರಸಾದ ಮಿಣಜಿಗಿ