ಹೃದಯದ ಅಂತರಾಳದಲಿ ಕಾಣಿಸಿದೆ ಪ್ರೀತಿಯ ಸುಳಿವು
ನನ್ನನೇ ನುಂಗಿ ಹಾಕಿದೆ ಅದರ ರಭಸದ ಸೆಳವು
ತಾಳೇಗರಿಯಲಿ ಏನೆಂದು ನಾ ಬರೆಯಲಿ ನಿನ್ನಯ ಕುರಿತು
ಒಮ್ಮೆ ನೀ ನಗಬಾರದೆ ನನ್ನ ಮನದ ಮೌನವ ಅರಿತು
ಹೊಸ ದಿಗಂತಕೆ ಕಾಲಿಡಬಾರದೆ ನೀ ನನ್ನ ಬೆರೆತು
ಪ್ರೀತಿಯ ಸುಳಿಗೆ ಸಿಲುಕಲು ಎಲ್ಲವ ಮರೆಯಿತು
ನೀರು ಕಾಣದ ಮರಭೂಮಿಗೆ ಜೇನಿನ ಮಳೆ ಸುರಿಯಿತು
ನಿನ್ನ ಕಂಡ ಆ ಕ್ಷಣ ವಿರಹದ ಪರದೆ ಸರಿಯಿತು
ಶಿವಪ್ರಸಾದ ಮಿಣಜಿಗಿ
ನನ್ನನೇ ನುಂಗಿ ಹಾಕಿದೆ ಅದರ ರಭಸದ ಸೆಳವು
ತಾಳೇಗರಿಯಲಿ ಏನೆಂದು ನಾ ಬರೆಯಲಿ ನಿನ್ನಯ ಕುರಿತು
ಒಮ್ಮೆ ನೀ ನಗಬಾರದೆ ನನ್ನ ಮನದ ಮೌನವ ಅರಿತು
ಹೊಸ ದಿಗಂತಕೆ ಕಾಲಿಡಬಾರದೆ ನೀ ನನ್ನ ಬೆರೆತು
ಪ್ರೀತಿಯ ಸುಳಿಗೆ ಸಿಲುಕಲು ಎಲ್ಲವ ಮರೆಯಿತು
ನೀರು ಕಾಣದ ಮರಭೂಮಿಗೆ ಜೇನಿನ ಮಳೆ ಸುರಿಯಿತು
ನಿನ್ನ ಕಂಡ ಆ ಕ್ಷಣ ವಿರಹದ ಪರದೆ ಸರಿಯಿತು
ಶಿವಪ್ರಸಾದ ಮಿಣಜಿಗಿ