ಕಾಡುತಿದೆ ಸದಾ ನನ್ನನು ನನ್ನವರು ಯಾರೆಂದು
ಭಂದ ಸಂಭಂದಗಳ ರಕ್ತಸಂಭದಿಗಳು ಯಾರೆಂದು
ಕತ್ತಲಿನ ದಾರಿಯಲಿ ಕೈ ಹಿಡಿದು ನೆಡೆಸಲು ಒಳ್ಳೆಯ ಕೈಗಳೆಲ್ಲಿವೆ
ನಿಸ್ವಾರ್ಥ ಸೇವೆಯ ಒಳ್ಳೆಯ ಗುಣವಿರುವ ಮನಸುಗಳೆಲ್ಲಿವೆ
ಎಲ್ಲರ ನಿಂದಿಸಿ ಏಳ್ಗೆಯ ತಡೆಯುವ ಕೆಟ್ಟ ಮನಸುಗಳೇ ಇಲ್ಲಿವೆ
ಪ್ರತಿದಿನ ಹುಟ್ಟುವ ಸೂರ್ಯನಲಿ ನಿಸ್ವಾಥ ಸೇವೆಯ ಗುಣವಿದೆ
ಪ್ರಕೃತಿಯ ಪಂಚಭೂತಗಳಲಿ ಅಹಂಕಾರವಿಲ್ಲದ ಸೇವೆ ಇದೆ
ನಿಮ್ಮ ನಿಮ್ಮೆಲ್ಲರ ನಡುವಿರುವ ಸಂಭಂದಗಳಲಿ ಇವೆಲ್ಲ ಎಲ್ಲಿ ಹೋಗಿದೆ
ಶಿವಪ್ರಸಾದ ಮಿಣಜಿಗಿ