Thank you message


Saturday, 14 January 2017

ಕಣ್ಣು ಕಣ್ಣುಗಳ ನಡುವೆ ನೆಡೆದಿದೆ ಒಲವಿನ ಸಮರ...

ಕಣ್ಣು ಕಣ್ಣುಗಳ ನಡುವೆ ನೆಡೆದಿದೆ ಒಲವಿನ ಸಮರ 
ಆ ಸಮರದ ಸುಖವನು ಅನುಭವಿಸುವವನೇ ಅಮರ 

ಮನಃಸ್ಥಿತಿಯ ಏರಿಳಿತಕೆ ನಿನ್ನ ನಗುವೇ ಕಾರಣ 
ಜೀವನದ ಯುಗಾದಿಗೆ ನಮ್ಮ ಕನಸುಗಳೇ ತೋರಣ 
ಸದ್ದಿಲ್ಲದೆ ನಿನ್ನ ಹುಡುಕುತ ಹೃದಯ ಹೊರಟಿದೆ ಚಾರಣ 

ನಿದ್ದೆಗಣ್ಣಲಿ ಮನಸು ಮಾಡಿದೆ ನಿನ್ನ ಹೆಸರಿನ ಪಾರಣ 
ಬದುಕಿನ ಆಸೆಗಳಿಗೆ ನಿನ್ನ ಪ್ರೀತಿಯ ಮಾತುಗಳೇ ಪ್ರೇರಣ 
ಎದುರಲಿ ನೀನಿದ್ದರೂ ಪ್ರೀತಿ ಹೇಳದೆ ಹೃದಯ ಮಾಡಿದೆ ಕಾಲಹರಣ 

                                                                           ಶಿವಪ್ರಸಾದ ಮಿಣಜಿಗಿ