Thank you message


Saturday, 7 January 2017

ಗಾಳಿಯಲಿ ತೇಲಿ ಬಂದಿದೆ ನಿನ್ನ ಪ್ರೇಮ ಸಂದೇಶ...

ಗಾಳಿಯಲಿ ತೇಲಿ ಬಂದಿದೆ ನಿನ್ನ ಪ್ರೇಮ ಸಂದೇಶ
ಕಳಚಿದೆ ಆ ರಭಸಕೆ ನನ್ನ ಪ್ರೀತಿಯ ವೇಷ 

ಶುರುವಾಗಿದೆ ಮನಸಲಿ ಪ್ರೀತಿಯ ಬೆಳೆಯ ಬಿತ್ತನೆ 
ಸುರಿಸು ಬಾ ಒಲವಿನ ಮಳೆಯ ಬೆಳೆಗೆ ತಟ್ಟನೆ 
ಮಾಡೋಣ ಬಾ ಕೈಜೋಡಿಸಿ ನಾಳೆಯ ಬದುಕಿನ ಕೆತ್ತನೆ 

ಶುರುವಾಗಿದೆ ಅಂತರಾಳದಲಿ ಪ್ರೀತಿಯ ಅಲೆಗಳ ಒಡೆತ 
ಬಲವಾಗಿದೆ ಅದರಿಂದ ಹೃದಯದ  ಸದ್ದಿಲ್ಲದ ಬಡಿತ 
ನಾಡಿ ಬಡಿತದಿ ಕೇಳಿ ಬರುತಿದೆ ನಿನ್ನ ಹೆಸರಿನ ಮಿಡಿತ 

                                                  ಶಿವಪ್ರಸಾದ ಮಿಣಜಿಗಿ