Thank you message


Saturday, 31 December 2016

ಹೊಸ ಮಾಸದ ಹೊಸ ದಿನಗಳ ಹೊಸ ವರುಷವಿದು...

ಹೊಸ ಮಾಸದ ಹೊಸ ದಿನಗಳ ಹೊಸ ವರುಷವಿದು 
ಹಳೆ ಬೇರಿನ ಹೊಸ ಚಿಗುರಿನ ಹೊಸ ಹರುಷವಿದು 

ಕಳೆದುಹೋದ ಹೆಜ್ಜೆಗಳ ನೆನೆಯುವ ಕ್ಷಣವಿದು 
ಜೀವನದ ಲಾಭ ನಷ್ಟಗಳ ಎಣಿಸುವ ದಿನವಿದು 
ನಾಳೆ ಎಂಬ ಆಶಾಕಿರಣವ ಸ್ವಾಗತಿಸುವ ಘಳಿಗೆ ಇದು 

ಸಂತಸದಿ ಸಂತೋಷವ ಅಪ್ಪಿಕೊಳ್ಳುವ ಕಾಲವಿದು  
ಹಾರೈಕೆಯ ಶುಭಸಂದೇಶವ ವಿನಿಮಯದ ಸಮಯವಿದು 
ಒಬ್ಬರಿಗೆ ಇನ್ನೊಬ್ಬರು ನಾಳೆಯ ಕನಸುಗಳಿಗೆ ಶುಭಕೋರುವ ಘಳಿಗೆ ಇದು 

                                                                                  ಶಿವಪ್ರಸಾದ ಮಿಣಜಿಗಿ