Thank you message


Saturday, 24 December 2016

ಓಡುತ ಸಾಗಿದೆ ಜೀವದ ನದಿಯು ಸೇರಲು ಸ್ವರ್ಗದ ಸಾಗರವ...

ಓಡುತ ಸಾಗಿದೆ ಜೀವದ ನದಿಯು ಸೇರಲು ಸ್ವರ್ಗದ ಸಾಗರವ 
ಪ್ರತಿ ಕ್ಷಣ ಹಂಬಲಿಸಿದೆ ಮನವು ಕಷ್ಟಗಳಿಲ್ಲದ ದಿವಸವ 

ನರಳುತ ಕೊರಗಿದೆ ಜೀವವು ನಾಳೆಯ ದಿನಗಳ ಯೋಚಿಸುತ 
ಕಳೆದಿದೆ ಪ್ರತಿ ಕ್ಷಣ ಬೇರೊಬ್ಬರ ಬಗೆಗೆ ಆಲೋಚಿಸುತ 
ಆಗಾಗ ಅಂತರಾಳವು ಹೇಳಿದೆ ಬಡಿದು ಸರಿಯಾದ ದಾರಿಯ ಸೂಚಿಸುತ 

ಸ್ಪರ್ಧಿಗಳು ನಾವು ಬಾಳಿನ ಆಟದಿ ಪ್ರಯತ್ನವಿಲ್ಲದ ಗೆಲುವ ಬಯಸುತ 
ಕಾರಣವಿಲ್ಲದೆ ಕಾರಣ ಹುಡುಕುತ ಸಾಗಿದೆ ಜೀವ ದಹಿಸಿತ
ನಡೆದಿದೆ ಜೀವನ ನೀರಗುಳ್ಳಿಯ ಹಾಗೆ ಇನ್ನೂ ಒಡೆಯದೆ ತೇಲುತ 

                                                                     ಶಿವಪ್ರಸಾದ ಮಿಣಜಿಗಿ