ಹುಟ್ಟಿದ ಜೀವಕೆ ಎಲ್ಲಿದೆ ಸಾರ್ತಕತೆ ತಾಯಿಯ ಮಡಿಲಿಲ್ಲದೆ
ಮಡಿದಾ ದೇಹಕೆ ಎಲ್ಲಿದೆ ಶಾಂತಿಯು ಎರಡು ಹನಿ ಕಣ್ಣೀರಿಲ್ಲದೆ
ಎರಡು ಹೃದಯಗಳಲಿ ಪ್ರೀತಿ ಎಲ್ಲಿದೆ ಮಮತೆಯ ಒಲವಿಲ್ಲದೆ
ಪಯಣದ ಪ್ರತಿ ಹೆಜ್ಜೆಯಲಿ ಸ್ಫೂರ್ತಿ ಎಲ್ಲಿದೆ ಒಲವಿನ ಗೆಲುವಿಲ್ಲದೆ
ಜೀವನದ ಆಟದಿ ಗೆಲುವೆಲ್ಲಿದೆ ಭಗವಂತನ ಕರುಣೆ ಇಲ್ಲದೆ
ಹೂವಿಗೆ ಎಲ್ಲಿದೆ ಮೋಕ್ಷವು ದುಂಬಿಯ ಸ್ಪರ್ಶವಿಲ್ಲದೆ
ತೀರಕೆ ಎಲ್ಲಿದೆ ಮುಕ್ತಿಯು ಅಲೆಗಳ ಬಡಿತವಿಲ್ಲದೆ
ಮಾನವನಿಗೆ ಎಲ್ಲಿದೆ ಮಾನ್ಯತೆ ದೇವರು ಕೊಡುವ ಯುಕ್ತಿ ಇಲ್ಲದೆ
ಶಿವಪ್ರಸಾದ ಮಿಣಜಿಗಿ