Thank you message


Saturday, 19 November 2016

ಸುಡುವ ಬಿಸಿಲಲ್ಲಿ ನಿನ್ನ ನೆನೆದಾಗ ತಂಗಾಳಿ ಸೂಸಿದೆ...

ಸುಡುವ ಬಿಸಿಲಲ್ಲಿ ನಿನ್ನ ನೆನೆದಾಗ ತಂಗಾಳಿ ಸೂಸಿದೆ 
ಎರಡು ಹೃದಯಗಳ ದಿಬ್ಬಣಕೆ ಮಲೆನಾಡಿನ ಚಪ್ಪರ ಹಾಸಿದೆ 

ಹೂವಿನ ಅರಳುವಿಕೆಯಲಿ ನೂರಾರು ಕನಸಿದೆ 
ಕನಸಲೂ ನನ್ನ ಹೃದಯ ನಿನ್ನೆಡೆಗೆ ಚಲಿಸಿದೆ 
ಏಳು ಜನ್ಮಕೂ ಇ ಜೀವ ನಿನ್ನನೇ ಹರಸಿದೆ 

ಕತ್ತಲಲೂ ಕೂಡಾ ನಿನ್ನ ಪ್ರೀತಿಯ ಪ್ರಕಾಶ ಬಯಸಿದೆ 
ಮಲೆನಾಡಿನ ಬೆಟ್ಟ ಸಾಲುಗಳ ನೋಡುವುದರಲ್ಲಿ  ಸೊಗಸಿದೆ 
ನಿನ್ನಯ ಸನಿಹ ಬಯಸುವ ಮುದ್ದಾದ ನನ್ನ ಮನಸಿದೆ 

                                     ಶಿವಪ್ರಸಾದ ಮಿಣಜಿಗಿ