Thank you message


Saturday, 29 October 2016

ಪ್ರೀತಿಯಲಿ ಬೀಳಲು ಬೇಕಿಲ್ಲ ಯಾವ ಕಾನೂನು...

ಪ್ರೀತಿಯಲಿ ಬೀಳಲು ಬೇಕಿಲ್ಲ ಯಾವ ಕಾನೂನು 
ಪ್ರೀತಿಯ ಸೆರೆ ಸಿಕ್ಕರೆ ಬೇಕಿಲ್ಲ ಯಾವ ಜಾಮೀನು 

ನಿನ್ನನು ಕನಸಿಗೆ ಕರೆಯಲು ನನ್ನ ಹಂಬಲ 
ನನ್ನ ಹೃದಯಕೆ ಸಿಗುತ್ತಿಲ್ಲ ನಿನ್ನ ಬೆಂಬಲ 
ಕನಸಲಿ ಒಮ್ಮೆ ಬಂದರೆ ಸಾಕು ಅದುವೇ ನನ್ನ ಗುರುಬಲ 

ಮನಸೇಕೆ ನಿನ್ನೆಡೆಗೆ ಹಾಗೆ ಸುಮ್ಮನೆ ಜಾರುತಿದೆ 
ಕಣ್ಣಕಟ್ಟಿ ಕತ್ತಲಲೂ ಬಿಟ್ಟರೂ ನಿನ್ನೆಡೆಗೆ ಸಾಗುತಿದೆ 
ಒಲವಿನ ಕರೆಯು ಸದ್ದಿಲ್ಲದೇ ಹೃದಯದ ಕಡೆಗೆ ಬರುತಿದೆ 

                                          ಶಿವಪ್ರಸಾದ ಮಿಣಜಿಗಿ