ಮನಸಾಗಿದೆ ನವಿಲಿನ ಗರಿಯಂತೆ ಇಂದು
ನನಸಾಗಿಸು ಬಾ ನನ್ನ ಕನಸುಗಳ ನೀ ಬಳಿ ಬಂದು
ಸಂತೆಯ ಗದ್ದಲದಲಿ ನಿನ್ನ ಕಣ್ಣುಗಳು ಕರೆದಿವೆ
ನನ್ನ ಗಮನ ನಿನ್ನೆಡೆಗೆ ಸೆಳೆಯುವಂತೆ ಮಾಡಿವೆ
ಪ್ರೀತಿಯ ಚಿಲುಮೆಗಳು ಮನಸಲಿ ತಂತಾನೆ ಮೂಡಿವೆ
ಸ್ವಲ್ಪ ಮರೆಗೆ ಸರಿದರೂ ಕಣ್ಣುಗಳು ನಿನ್ನನೇ ಬಯಸಿವೆ
ಕಣ್ಣರೆಪ್ಪೆಗಳ ಬಡಿತ ಉಸಿರಾಟಕೆ ಏರೀಳಿತವ ತರಿಸಿವೆ
ನೋಡು ನೋಡುತಲೇ ಎಲ್ಲಾ ನೋವುಗಳ ಮರೆಸಿವೆ
ಶಿವಪ್ರಸಾದ ಮಿಣಜಿಗಿ
ನನಸಾಗಿಸು ಬಾ ನನ್ನ ಕನಸುಗಳ ನೀ ಬಳಿ ಬಂದು
ಸಂತೆಯ ಗದ್ದಲದಲಿ ನಿನ್ನ ಕಣ್ಣುಗಳು ಕರೆದಿವೆ
ನನ್ನ ಗಮನ ನಿನ್ನೆಡೆಗೆ ಸೆಳೆಯುವಂತೆ ಮಾಡಿವೆ
ಪ್ರೀತಿಯ ಚಿಲುಮೆಗಳು ಮನಸಲಿ ತಂತಾನೆ ಮೂಡಿವೆ
ಸ್ವಲ್ಪ ಮರೆಗೆ ಸರಿದರೂ ಕಣ್ಣುಗಳು ನಿನ್ನನೇ ಬಯಸಿವೆ
ಕಣ್ಣರೆಪ್ಪೆಗಳ ಬಡಿತ ಉಸಿರಾಟಕೆ ಏರೀಳಿತವ ತರಿಸಿವೆ
ನೋಡು ನೋಡುತಲೇ ಎಲ್ಲಾ ನೋವುಗಳ ಮರೆಸಿವೆ
ಶಿವಪ್ರಸಾದ ಮಿಣಜಿಗಿ