ಪ್ರೀತಿಯೇ ಇಲ್ಲದ ಜಗವನು ಸೃಷ್ಟಿಸದಿರು
ಕರುಣೆಯೇ ಇಲ್ಲದ ಮನಸನು ಹುಟ್ಟಿಸದಿರು
ಬೆಳವಣಿಗೆ ಮರೆತಿರುವ ಬೀಜವನು ಬಿತ್ತದಿರು
ಒಣಗಿದ ಎಲೆಗಳ ಸಸಿಯನು ನೆಟ್ಟದಿರು
ಸಂತಸ ಸಡಗರ ಕಾಣದ ಮನೆಯನು ಕಟ್ಟದಿರು
ಪ್ರೀತಿಯಲಿ ನೊಂದ ಮನಸನು ತಡುವದಿರು
ಮುಚ್ಚಿಕೊಂಡ ಹೃದಯದ ಬಾಗಿಲನು ತಟ್ಟದಿರು
ನಿನ್ನ ಹೆಸರಿಗೆ ಬರೆಯದ ಅನ್ನವ ಮುಟ್ಟದಿರು
ಶಿವಪ್ರಸಾದ ಮಿಣಜಿಗಿ
ಕರುಣೆಯೇ ಇಲ್ಲದ ಮನಸನು ಹುಟ್ಟಿಸದಿರು
ಬೆಳವಣಿಗೆ ಮರೆತಿರುವ ಬೀಜವನು ಬಿತ್ತದಿರು
ಒಣಗಿದ ಎಲೆಗಳ ಸಸಿಯನು ನೆಟ್ಟದಿರು
ಸಂತಸ ಸಡಗರ ಕಾಣದ ಮನೆಯನು ಕಟ್ಟದಿರು
ಪ್ರೀತಿಯಲಿ ನೊಂದ ಮನಸನು ತಡುವದಿರು
ಮುಚ್ಚಿಕೊಂಡ ಹೃದಯದ ಬಾಗಿಲನು ತಟ್ಟದಿರು
ನಿನ್ನ ಹೆಸರಿಗೆ ಬರೆಯದ ಅನ್ನವ ಮುಟ್ಟದಿರು
ಶಿವಪ್ರಸಾದ ಮಿಣಜಿಗಿ