Thank you message


Saturday, 13 August 2016

ಸಂತಸವ ಕಂಡೆನು ಇಂಪಾದ ನಿನ್ನಯ ಹೆಸರಲಿ...

ಸಂತಸವ ಕಂಡೆನು ಇಂಪಾದ ನಿನ್ನಯ ಹೆಸರಲಿ 
ಅದುವೇ ಉಳಿಯಲಿ ಶಾಶ್ವತವಾಗಿ ನನ್ನಯ ಉಸಿರಲಿ 

ಶುರುವಾಗಿದೆ ಹೃದಯದಲಿ ಪ್ರೀತಿಯ ವ್ಯವಸಾಯ 
ಕಣ್ಣಿನ ನೋಟಗಳು ಸೇರುಹುದೇ ಮುಂಗಾರಿನ ಬೇಸಾಯ 
ನಿಸ್ಕಲ್ಮಷ ಪ್ರೀತಿ ಬೆಳೆಯ ಬೆಳೆಯಲು ಬೇಕಿದೆ ನಿನ್ನಯ ಸಹಾಯ 

ಪ್ರೀತಿಸುವ ಮನಸುಗಳಲಿ ವಿರಹವು ಕಡ್ಡಾಯ 
ಒದಗಿಸು ದೇವರೆ ವಿರಹದ ಕ್ಷಣಗಳಿಗೆ ಪರ್ಯಾಯ 
ಓ ಗೆಳತಿ ಎಂದೂ ತೋರದಿರು ನನ್ನ ಪ್ರೀತಿಗೆ ಬಂಡಾಯ 

                                           ಶಿವಪ್ರಸಾದ ಮಿಣಜಿಗಿ