Thank you message


Saturday, 9 July 2016

ಸೂಸುವ ಗಾಳಿಯಲಿ ಸೌಗಂಧದ ಪರಿಮಳವಿದೆ...

ಸೂಸುವ ಗಾಳಿಯಲಿ ಸೌಗಂಧದ ಪರಿಮಳವಿದೆ 
ನೋಡುವ ಕಣ್ಣುಗಳಲಿ ಸೆಳೆಯುವ ಆಕರ್ಷಣೆ ಇದೆ 

ಸಪ್ತ ಸ್ವರದಲಿ ಮನಸೆಳೆಯುವ ಇಂಪಾದ ಹಾಡಿದೆ 
ಅಮ್ಮ ಎನ್ನುವ ಪದದಲಿ ಒಲವಿನ ಕರೆಯಿದೆ 
ನೊಂದ ಜೀವದಲಿ ವೇದನೆಯ ನೋವಿನ ಕೂಗಿದೆ 

ಒಬ್ಬರ ಗೆಲುವಿನ ಸಂಭ್ರಮದಲಿ ಇನ್ನೊಬ್ಬರ ಸೋಲಿನ ನೋವಿದೆ 
ಒಂದು ಮನಸಿನ ಸಂತಸದಲಿ ಇನ್ನೊಂದು ಮನಸಿನ ಕಣ್ಣೀರಿದೆ 
ಬಾಳಿನ ಪ್ರತಿ ಹೆಜ್ಜೆ ಹೆಜ್ಜೆಗೂ ಕಾಣದ ದೇವರ ಪವಾಡವಿದೆ 

                                           ಶಿವಪ್ರಸಾದ ಮಿಣಜಿಗಿ