Thank you message


Saturday, 2 July 2016

ಕೈಯಲಿ ಬರೆದ ಕುಂಚದ ಹಾಗೆ ನಿನ್ನಯ ಅಂದವು ಕಾಣುತಿದೆ...

ಕೈಯಲಿ ಬರೆದ ಕುಂಚದ ಹಾಗೆ ನಿನ್ನಯ ಅಂದವು ಕಾಣುತಿದೆ 
ಜೇನಲಿ ಮಿಂದೆದ್ದ ದುಂಬಿಯ ಹಾಗೆ ನಿನ್ನಯ ಅದರವು ತೋರುತಿದೆ 

ಪ್ರೀತಿಯು ಮೂಡಿದೆ ಕಣ್ಣುಗಳ ಒಪ್ಪಂದದ ಮೇರಿಗೆ 
ಆಗುವ ಬಾ ನಾವು ಪ್ರೀತಿಯ ಹೊತ್ತು ನಡೆವ ಸಾರಿಗೆ 
ಸೇರಿಸೋಣ ಬಾ ಪ್ರೀತಿಯನು ಹೃದಯದ ಊರಿಗೆ 

ಎರೆಯೋಣ ನೀರಿನ ಧಾರೆಯನು ಪ್ರೀತಿಯ ಮರದ ಬೇರಿಗೆ 
ಸಂಭಂದದ ಕೊಂಡಿಯಾಗುವ ನಮ್ಮಯ ನಾಳೆಯ ಸೂರಿಗೆ 
ತಕ್ಷಣವೇ ಬರಲಿ ದೇವರಿಂದ ಕಂಕಣ ಭಾಗ್ಯದ ಆದೇಶವ ಜಾರಿಗೆ 

                                                    ಶಿವಪ್ರಸಾದ ಮಿಣಜಿಗಿ