Thank you message


Saturday, 23 July 2016

ದುಂಬಿಯೆ ತಿಳಿಸು ಬಾ ಹೂವಿನ ಪರಿಮಳವ ಹೂಬಳ್ಳಿಗೆ...

ದುಂಬಿಯೆ ತಿಳಿಸು ಬಾ ಹೂವಿನ ಪರಿಮಳವ ಹೂಬಳ್ಳಿಗೆ 
ತೀರವೇ ತಿಳಿಸು ಬಾ ಅಲೆಗಳ ಅಪ್ಪುಗೆಯ ಆನಂದವ ಸಾಗರಕೆ 

ಕಣ್ಣೀರೇ ಹೇಳು ಬಾ ನೋವಿನ ವೇದನೆಯ ಕಣ್ಣರೆಪ್ಪೆಗೆ 
ಆನಂದಭಾಷ್ಪವೇ ಹೇಳು ಬಾ ಖುಷಿಯ ನಲಿವನು ಕಣ್ಣಂಚಿಗೆ 
ದೇವರೇ ತೋರು ಬಾ ಅಂತರಾಳದ ಶಕ್ತಿಯ ಕುಗ್ಗಿದ ಮನಸಿಗೆ 

ಮಳೆಯೇ ತಿಳಿಸು ಬಾ ನಿನ್ನ ಮಾಯವ ಚಲಿಸುವ ಮೋಡಗಳಿಗೆ 
ಭೂಮಿಯೇ ತಿಳಿಸು ಬಾ ನಿನ್ನಯ ಹಿರಿಮೆಯ ಏನೂ ಅರಿಯದ ಮನುಜಗೆ 
ದೇವರೇ ತೋರು ಬಾ ಆತ್ಮ ಬಲವ ಬಳಲುತಿರೋ ಜೀವಿಗೆ 

                                             ಶಿವಪ್ರಸಾದ ಮಿಣಜಿಗಿ