Thank you message


Saturday, 25 June 2016

ಎಲ್ಲಿದೆ ಸತ್ಯವು ಎಲ್ಲಿದೆ ನ್ಯಾಯವು ನಮ್ಮ ಚಂಚಲ ಮನಸಿನಲಿ...

ಎಲ್ಲಿದೆ ಸತ್ಯವು ಎಲ್ಲಿದೆ ನ್ಯಾಯವು ನಮ್ಮ ಚಂಚಲ ಮನಸಿನಲಿ 
ಗಾಂಧೀಜಿ ಕಂಡ ರಾಮರಾಜ್ಯವು ಕಾಣುತಿದೆ ಹಗಲ ಕನಸಿನಲಿ 

ಮೋಸವು ತುಂಬಿನ ನದಿಯೇ ಹರಿಯಲು ಕಡಲು ಏನು ಮಾಡುವುದು 
ಹಿಂಸೆಯ ಗಾಳಿ ಬೀಸುತಲಿರಲು ಅಹಿಂಸೆಯ ಪರಿಸರ ಎಲ್ಲಿ ಉಳಿಯುಹುದು 
ಅಂಧಕಾರದ ಜನಗಳ ಮದ್ಯ ಸತ್ಯವುತಾನೇ ಏನು ಮಾಡುವುದು 

ಸುಳ್ಳು ಮೋಸದ ದೃಶ್ಯಗಳೇ ದಿನವೂ ಇ ಕಣ್ಣುಗಳು ನೋಡುವುದು 
ನಾಳೆಯ ಪೀಳಿಗೆಯ ಏಳಿಗೆಯ ಬಗ್ಗೆ ಪ್ರತಿ ಕ್ಷಣ ನನ್ನನು ಕಾಡುವುದು 
ದೇವರೇ ನೀನೇ ಕಾಪಾಡಬೇಕು ಎನ್ನುತ ಮನವು ಸದಾ ಬೇಡುವುದು 

                                                         ಶಿವಪ್ರಸಾದ ಮಿಣಜಿಗಿ