Thank you message


Saturday, 4 June 2016

ಬವಣೆಗಳ ಅರ್ಥೈಸಿಕೊಳ್ಳುವ ಮನಸುಗಳೆ ಇಲ್ಲವಾಗಿವೆ...

ಬವಣೆಗಳ ಅರ್ಥೈಸಿಕೊಳ್ಳುವ ಮನಸುಗಳೆ ಇಲ್ಲವಾಗಿವೆ 
ಪ್ರತಿಷ್ಟೆಯ ಹಹಮ್ಮಿನಲಿ ಸಂಭಂದಗಳು ಸತ್ತುಹೋಗಿವೆ 

ಪ್ರತಿ ಕೆಲಸದಲ್ಲೂ ಪ್ರತಿಫಲ ಬಯಸುವ ಬಂಧು ಬಾಂಧವರು 
ಮತ್ತೊಬ್ಬರ ಏಳೀಗೆಯ ಸಹಿಸದ ಹಾದಿಯಲಿ ನೆಡೆದು ಬಂದವರು 
ವಿಷದ ಬೀಜವ ಉಡಿಯಲ್ಲಿ ಕಟ್ಟಿಕೊಂಡು ತಂದವರು 

ಎಲ್ಲಿದೆ ಬಹುಮಾನ ಎಲ್ಲಿದೆ ದಣಿದ ಜೀವಕೆ ಸನ್ಮಾನ 
ಕಾದಿದೆ ಪ್ರತಿ ಹೆಜ್ಜೆಯಲ್ಲೂ ಎಲ್ಲರಿಂದ ಅವಮಾನ 
ಕಾಲವೇ ಉತ್ತರಿಸುವದು ಅವಮಾನಿಸಿದ ಪರಿಣಾಮ 

                                    ಶಿವಪ್ರಸಾದ ಮಿಣಜಿಗಿ