Thank you message


Saturday, 28 May 2016

ದ್ರುವ ತಾರೆಯು ನಿನ್ನ ವಿಳಾಸವ ಕೇಳಿದೆ...

ದ್ರುವ ತಾರೆಯು ನಿನ್ನ ವಿಳಾಸವ ಕೇಳಿದೆ 
ಮಿಣ ಮಿಣ ಹೊಳೆಯಲು ನಿನ್ನ ಸಹಾಯವ ಬೇಡಿದೆ 

ಎಲೆಯ ಹಸಿರಂತೆ ನನ್ನುಸಿರಂತೆ ನನ್ನ ಒಳಗೆ ನಿ ಮೂಡಿದೆ 
ಕಡಲ ಅಲೆಯಂತೆ ಮುಗಿಲ ಮಳೆಯಂತೆ ನಿ ನನ್ನನು ಸೇರಿದೆ 
ಪ್ರತಿ ಕ್ಷಣವೂ ನಿನ್ನ ನೆನಪು ಸೋಚಿಗದಂತೆ ಕಾಡಿದೆ 

ಮುಂಜಾನೆಯ ಮೊಗ್ಗಂತೆ ಸಿಹಿಯಾದ ಜೇನಂತೆ ನಿ ನನ್ನ ಮಾಡಿದೆ 
ವಿಷದ ಹಾವಂತೆ ಕಹಿಯಾದ ಅಮೃತದಂತೆ ಜಗವು ನಮ್ಮನು ನೋಡಿದೆ 
ಪ್ರೇಮಲೋಕದಂತೆ ಚೈತ್ರದ ಚಿಗುರಿನಂತೆ ಪ್ರೀತಿ ಗಾಯನ ಹಾಡಿದೆ 

                                                       ಶಿವಪ್ರಸಾದ ಮಿಣಜಿಗಿ