Thank you message


Saturday, 7 May 2016

ನಿನ್ನ ನೋಡುವ ಆಸೆ ನಿದ್ದೆಯ ಕೆಡಿಸಿದೆ ಏಕೆ...

ನಿನ್ನ ನೋಡುವ ಆಸೆ ನಿದ್ದೆಯ ಕೆಡಿಸಿದೆ ಏಕೆ 
ಮುಂಜಾನೆಯ ಸವಿಗನಸಲಿ ನಿನ್ನಯ ನೆನಪೊಂದು ಸಾಕೆ 

ಸದ್ದಿಲ್ಲದೆ ಶುರುವಾಗಿದೆ ಪ್ರೀತಿಯ ಜಾತ್ರೆಯು 
ಆರಂಭಿಸುವ ಬಾ ಕೈಜೋಡಿಸಿ ಜೀವನದ ಯಾತ್ರೆಯು 
ನಿನನ್ನ ಜೊತೆಗಿರೆ ನನಗಿದೆ ಸದಾ ಜಯದ ಖಾತ್ರಿಯು 

ಮಾಡಿದೆ ನಿನ್ನಯ ವರ್ಣನೆಯ ನನ್ನ ಇ ಕೊರಳು 
ಬೆರಳಿಂದ ನಿನ್ನ ಚಿತ್ರವ ಗೀಚಿದೆ ಆ ಮರಳು 
ಸದಾ ನಾನಾಗುವ ಆಸೆ ನಿನ್ನ ಜೊತೆಗಿರುವ ಆ ನೆರಳು 

                                      ಶಿವಪ್ರಸಾದ ಮಿಣಜಿಗಿ