Thank you message


Saturday, 23 April 2016

ಅಮ್ಮ ಎಂಬುದು ಬರಿ ಪದವಲ್ಲ ಮಮತೆಯ ಕರೆಯಮ್ಮ ...

ಅಮ್ಮ ಎಂಬುದು ಬರಿ ಪದವಲ್ಲ ಮಮತೆಯ ಕರೆಯಮ್ಮ 
ಎರಡಕ್ಷರದಲಿ ತುಂಬಿದೆ ಒಲವು ಅಕ್ಕರೆಯ ಗಣಿಯಮ್ಮ 

ಮಾನವ ಕುಲಕೆ ಜನ್ಮವ ನೀಡಿದ ಹಸಿರಿನ ಸಿರಿಯಮ್ಮ 
ನವಮಾಸವನು ಹೊತ್ತು ಹೆತ್ತ ಕರುಳಿನ ಬಳ್ಳಿಯಮ್ಮ 
ಹಸಿದಾ ಹೊಟ್ಟೆಗೆ ಕೈತುತ್ತನಿಟ್ಟ ಅನ್ನದಾತೆಯಮ್ಮ 

ಏನೆಂದು ಬರೆಯಲಿ ನಿನ್ನಯ ಬಗೆಗೆ ಪದಗಳೇ ಸಿಗದಮ್ಮ 
ಮನಸ್ಪೂರ್ತಿ ಹರಸುವ ನೀನು ನಡೆದಾಡುವ ದೇವರಮ್ಮ 
ನಿನಗೋಸ್ಕರ ಏನೇ ಮಾಡಿದರು ನಿನ್ನ ಋಣವು ಎಂದೂ ತೀರದಮ್ಮ 

                                                           ಶಿವಪ್ರಸಾದ ಮಿಣಜಿಗಿ