Thank you message


Saturday, 2 April 2016

ಎದೆಯಲಿ ಮೂಡುವ ಭಾವನೆಗಳು ಹೊಸತರ...

ಎದೆಯಲಿ ಮೂಡುವ ಭಾವನೆಗಳು ಹೊಸತರ 
ನಿನ್ನ ಪ್ರೀತಿಯಲಿ ಬೀಳಲು ತುದಿಗಾಲಿನ ಅವಸರ 

ಸಾಗುವ ದಾರಿಯಲಿ ನಿನ್ನಯ ನೆನಪಿನ ಸುರಿಮಳೆ 
ಕಣ್ಣಹಾಯಿಸಿದಲೆಲ್ಲ ನಿನ್ನ ಕನಸಿನ ಹೂಮಳೆ 
ಬಿಡದೆ ಸುರಿಯುತಿದೆ ನಿನ್ನ ಅಮಲಿನ ಜಡೆಮಳೆ

ಪ್ರೀತಿ ಸಾಗರವ ಸೇರಲು ಬಯಸಿದೆ ಜೇನಹೋಳೆ 
ಆಕಾಶದ ಕಳೆಗಟ್ಟಿದೆ ನಿನ್ನ ನಗುವಿನ ಖಳೆ 
ಸುರಿಸು ಬಾ ತಂಗಾಳಿಯೇ ಪ್ರೇಯಸಿಯ ನಗುವಿನ ಮಳೆ 

                                        ಶಿವಪ್ರಸಾದ ಮಿಣಜಿಗಿ