Thank you message


Saturday, 5 March 2016

ನಿನ್ನ ಬರಹದಿ ಸಿಲುಕಿದೆ ನಮ್ಮ ಹಣೆ...

ನಿನ್ನ ಬರಹದಿ ಸಿಲುಕಿದೆ ನಮ್ಮ ಹಣೆ 
ತಪ್ಪು ಗೀಚಿದರೆ ಅದು ಯಾರ ಹೊಣೆ 

ದೋಷದ ಸಸಿಯನು ಸೃಷ್ಟಿಯ ಮಾಡಬೇಡ 
ಜನನಿಗೆ ಇದರ ಕಷ್ಟವನು ಕೊಡಬೇಡ 
ಓ ದೇವರೆ ಸದಾ ನಿನ್ನ ಸಹಾಯದ ಹಸ್ತವ ಬಿಡಬೇಡ 

ಏನಿದು ಕಾರಣ ಇಂತಹ ದೋಷದ ಸೃಷ್ಟಿಗೆ 
ಪ್ರತಿ ಹೆಜ್ಜೆಗೂ ಕಾಡುವ ಬರಗಾಲದಂತಹ ಬವಣೆಗೆ
ಓ ದೇವರೆ ಉತ್ತರಿಸಲೇ ಬೇಕು ನೀನು ನನ್ನ ಇ ಪ್ರಶ್ನೆಗೆ 


                                          ಶಿವಪ್ರಸಾದ ಮಿಣಜಿಗಿ