ಎಣೆಯಲೆ ಕನಸುಗಳಿಂದ ನಿನ್ನಯ ಜಡೆಯನು
ಹಾಕಲೆ ಕೊರಳಿಗೆ ಕವನಗಳ ಮುತ್ತಿನ ಹಾರವನು
ಆಲಿಸು ಬಾ ಮುಂಜಾನೆಯ ರಾಗದಿ ಪ್ರೀತಿಯ ಕರೆಯನು
ಸೇರಿಸು ಬಾ ಬಾಳ ಹಾಡಿಗೆ ನಿನ್ನಯ ಸಪ್ತಸ್ವರದ ದನಿಯನು
ಪ್ರೀತಿಯ ಬೆರಳಿನಿಂದ ಸ್ಪರ್ಶಿಸು ಬಾ ವೇದನೆಯ ನೀರಗುಳ್ಳೆಯನು
ಬೇಡವೆಂದರೂ ಮತ್ತೆ ಮತ್ತೆ ನಿನ್ನ ಬಳಿಯೇ ಸುಳಿವೆನು
ಕರೆಯದೆ ನಿನ್ನ ಕನಸಿಗೆ ಅನುದಿನ ಬರುವೆನು
ಸದಾ ಕಾಲ ನಿನ್ನ ಮನಸಿಗೆ ಸಂತಸವ ತರುವೆನು
ಶಿವಪ್ರಸಾದ ಮಿಣಜಿಗಿ