Thank you message


Saturday, 13 February 2016

ನಮ್ಮ ಹೃದಯವನು ನಡುಗಿಸುವುದು ಆ ಭಯ...

ನಮ್ಮ ಹೃದಯವನು ನಡುಗಿಸುವುದು ಆ ಭಯ 
ಅದನು ಎದುರಿಸಲು ಬೇಕು ನಮ್ಮ ಮನಸಲಿ ಅಭಯ 

ಭಯವಿದ್ದರೆ ಮನಸೆಲ್ಲ ಚಿಂತೆಯ ಗೂಡು 
ಬಾಳಿನ ಪರಿಸರವಾಗುವುದು ಆತಂಕದ ಕಾಡು 
ಧೈರ್ಯ ಒಂದಿದ್ದರೆ ನಿನಾಗಬಹುದು ವನಸಂತದ ಹಾಡು 

ಇರುಳಿನ ಪಯಣದಲಿ ಬಾಳೆಲ್ಲ ಕತ್ತಲಿನ ನಾಡು 
ಕಾರ್ಮೋಡದ ದುಃಖಗಳಿಗೆ ಅಂಜುವುದೆ ನಮ್ಮ ಪಾಡು 
 ಧೈರ್ಯ ತುಂಬಲು ಶಶಿ ಬರಲು ಜೀವನವೇ ಅರುಣೋದಯದ ಹಾಡು 

                                                               ಶಿವಪ್ರಸಾದ ಮಿಣಜಿಗಿ