ನೋವಿನ ದುಃಖವನು ಮರೆಸಬೇಡ ಅತ್ತುಬಿಡು
ಸಹಿಸದಾ ಕೋಪವನು ತಡೆಯಬೇಡ ಕಕ್ಕಿಬಿಡು
ವೇದನೆಯ ರಾಗವನು ಮರೆಸಬೇಡ ಹಾಡಿಬಿಡು
ಮಗುವಿನ ನಗುವನು ಅಳಿಸಬೇಡ ನಕ್ಕುಬಿಡು
ಜೀವನದ ಕ್ಷಣ ಕ್ಷಣ ಮನಸಿಗೆ ಇಷ್ಟದ ಹಾಗೆ ಕಳೆದುಬಿಡು
ಕರೆಯುವ ಬದುಕಿನ ಕರೆಗೆ ಓಗೊಟ್ಟುಬಿಡು
ಭಯದ ಸೆಳೆತಕೆ ಅಂಜದೆ ಮುಂದೆ ನುಗ್ಗಿಬಿಡು
ಪ್ರತಿ ಹೆಜ್ಜೆಯೂ ನಿನ್ನ ಮನಸಿಗೆ ಇಷ್ಟದ ಹಾಗೆ ನಡೆದುಬಿಡು
ಶಿವಪ್ರಸಾದ ಮಿಣಜಿಗಿ