Thank you message


Saturday, 16 January 2016

ಆಡ ಬನ್ನಿ ತುಟಿಗಳೆ ತುಟಿಗಳೊಂದಿಗೆ ಸರಸವ...

ಆಡ ಬನ್ನಿ ತುಟಿಗಳೆ ತುಟಿಗಳೊಂದಿಗೆ ಸರಸವ 
ಮರೆಸಬನ್ನಿ ಇಗಲೇ ಕಗ್ಗತ್ತಲ ಇರುಳ ವಿರಸವ 

ಕೈ ಮುಷ್ಠಿಯಲಿ ಕಟ್ಟಿಹಾಕುವ ವೇದನೆಯ ಕಾಮವು 
ಮನಬಿಚ್ಚಿ ಮುಗಿಲಿಗೆ ಹಾರುವ ಸ್ವಚ್ಛಂದದ ಪ್ರೇಮವು 
ಇವೆರಡರ ನಿಭಾಯಿಸುವುದೆ ನಮ್ಮ ಮನಸಿನ ಭಾವವು 

ಗಗನವ ಚುಂಬಿಸುವ ಕನಸಿನ ಉತ್ಸಾಹವು 
ಕನಸು ನನಸಾಗದಿರಲಿ ಮೂಡಿ ಬಂದ ಉದಾಸವು 
ಇವೆರಡರ ನಿಭಾಯಿಸುವುದೆ ನಮ್ಮ ಮನಸಿನ ಭಾವವು

                                          ಶಿವಪ್ರಸಾದ ಮಿಣಜಿಗಿ