Thank you message


Saturday, 2 January 2016

ಶುರುವಾಗಿದೆ ನಿನ್ನ ಪ್ರೀತಿಯ ಊರಿಗೆ ಪ್ರವಾಸ...

ಶುರುವಾಗಿದೆ ನಿನ್ನ ಪ್ರೀತಿಯ ಊರಿಗೆ ಪ್ರವಾಸ 
ಎಷ್ಟು ದೂರ ಪ್ರಯಾಣಿಸಿದರೂ ಕಾಣದಾಗಿದೆ ಆಯಾಸ 

ದೇವರೆ ಕಲ್ಪಿಸಿರುವನು ನಿನ್ನಯ ಸಹವಾಸ 
ನಿ ನನ್ನ ಜೊತೆಗಿರಲು ಪ್ರೀತಿಗಿಲ್ಲ ಉಪವಾಸ 
ದೂರ ಓಡಿದೆ ಮನವ ಕಾಡುವ ವಿರಹದ ವನವಾಸ 

ಕಂಡೆನು ಹೂವ ಮುಖದಲಿ ಹರಳುವ ಮಂದಹಾಸ 
ಸದಾ ಇರಲಿ ಹೂವಿನ ಜೊತೆ ನಿನ್ನಯ ವಾಸ 
ಹುಡುಕುತಾ ಬಂದಿವೆ ದುಂಬಿಗಳು ನಿನ್ನಯ ನಿವಾಸ 

                                      ಶಿವಪ್ರಸಾದ ಮಿಣಜಿಗಿ