ಬರೆಯಲೆ ನಾಲ್ಕು ಸಾಲುಗಳನು ನಿನ್ನಯ ನೆನಪಲಿ
ಕಂಡೆನು ಬದುಕಿನ ಹಾದಿ ನಿನ್ನ ಕಣ್ಣ ಹೊಳಪಲಿ
ತುಂಬಿರುವೆ ನೀನು ಜೀವದ ಕ್ಷಣ ಕ್ಷಣದ ಉಸಿರಲಿ
ಅದೇನೋ ಮೋಡಿಯೋ ನಿನ್ನ ಮುದ್ದಾದ ಹೆಸರಲಿ
ಕಳೆದುಹೋದೆ ಹಾಗೆ ಸುಮ್ಮನೆ ಮಲೆನಾಡಿನ ಹಸಿರಲಿ
ನಿ ನನ್ನ ಅಪ್ಪಿದ ಹಾಗೆ ಮುಂಜಾನೆಯ ಕನಸಲಿ
ಯಾವಾಗ ಬರುವುದು ಆ ಕ್ಷಣ ಬಾಳಿನ ನನಸಲಿ
ಕನಸುಗಳು ನನಸಾಗಿ ಯಾವಾಗಲು ನೀನಿರು ನನ್ನ ಮನಸಲಿ
ಶಿವಪ್ರಸಾದ ಮಿಣಜಿಗಿ
ಕಂಡೆನು ಬದುಕಿನ ಹಾದಿ ನಿನ್ನ ಕಣ್ಣ ಹೊಳಪಲಿ
ತುಂಬಿರುವೆ ನೀನು ಜೀವದ ಕ್ಷಣ ಕ್ಷಣದ ಉಸಿರಲಿ
ಅದೇನೋ ಮೋಡಿಯೋ ನಿನ್ನ ಮುದ್ದಾದ ಹೆಸರಲಿ
ಕಳೆದುಹೋದೆ ಹಾಗೆ ಸುಮ್ಮನೆ ಮಲೆನಾಡಿನ ಹಸಿರಲಿ
ನಿ ನನ್ನ ಅಪ್ಪಿದ ಹಾಗೆ ಮುಂಜಾನೆಯ ಕನಸಲಿ
ಯಾವಾಗ ಬರುವುದು ಆ ಕ್ಷಣ ಬಾಳಿನ ನನಸಲಿ
ಕನಸುಗಳು ನನಸಾಗಿ ಯಾವಾಗಲು ನೀನಿರು ನನ್ನ ಮನಸಲಿ
ಶಿವಪ್ರಸಾದ ಮಿಣಜಿಗಿ