Thank you message


Saturday, 28 November 2015

ಪೂಜಿಸು ಪ್ರತಿದಿನ ಅನ್ನ ಕೊಟ್ಟ ದೇವರನು...

ಪೂಜಿಸು ಪ್ರತಿದಿನ ಅನ್ನ ಕೊಟ್ಟ ದೇವರನು 
ಆರಾದಿಸು ಪ್ರತಿಕ್ಷಣ ಜನ್ಮ ಕೊಟ್ಟ ತಾಯಿಯನು 

ಜಪತಪಗಳು ಬೇಡ ಹೂವ ಪತ್ರಿಯು ಬೇಡ 
ದೀರ್ಘದಂಡ ಸಾಸ್ಠಾಂಗ ನಮಸ್ಕಾರಗಳು ಬೇಡ
ಪ್ರತಿದಿನ ಪ್ರತಿಕ್ಷಣ ದಾನ ಧರ್ಮವ ಬಿಡಬೇಡ 

ಯಜ್ಞ ಯಾಗಾದಿಗಳು ಬೇಡ ವ್ರತ ಉಪವಾಸಗಳು ಬೇಡ 
ಮೂರ್ತಿ ಪೂಜೆಗಳು ಬೇಡ ಕೀರ್ತನೆ ಭಜನೆಗಳು ಬೇಡ 
ಪ್ರತಿದಿನ ಪ್ರತಿಕ್ಷಣ ಕರುಣೆ ಮಮತೆಯ ಮರೆಯಬೇಡ 

                                        ಶಿವಪ್ರಸಾದ ಮಿಣಜಿಗಿ