Thank you message


Saturday, 14 November 2015

ಕತ್ತಲನು ಓಡಿಸಿ ಬೆಳಕನು ತರುವ ದೀಪಾವಳಿ...

ಕತ್ತಲನು ಓಡಿಸಿ ಬೆಳಕನು ತರುವ ದೀಪಾವಳಿ 
ಅಂದಕಾರವ ಅಳಿಸಿ ಬಾಳನು ಬೆಳಗುವ ಲೀಲಾವಳಿ 

ಸತ್ಯವನು ಬೆಳಗುವ ದೀಪವನು ಹಚ್ಚುವ 
ಸುಳ್ಳು ಎನ್ನುವ ಅಂದಕಾರವ ಬಾಳಿಂದ ಓಡಿಸುವ 
ಹಚ್ಚುವ ಬಾರಾ ಪ್ರೀತಿಯ ದೀಪವ 

ಸಡಗರದ ಸಂಭ್ರಮವ ಎಲ್ಲೆಡೆ ಹರಡುವ 
ಭಾಂದವ್ಯ ಸಂಭಂದಗಳ ಜೋಡಿಸುವ 
ಹಚ್ಚುವ ಬಾರಾ ಬಂಧನಗಳ ದೀಪವ 

                   ಶಿವಪ್ರಸಾದ ಮಿಣಜಿಗಿ