ಮಿಂಚೊಂದು ನಿನ್ನ ಛಾಯಾಚಿತ್ರವ ತೆಗೆದ ಹಾಗೆ
ಗುಡುಗೊಂದು ನಿನ್ನ ಕರೆಗೆ ಓಗೊಡುವ ಹಾಗೆ
ಕಲ್ಪಿಸಿಕೊಂಡಿದೆ ನನ್ನ ಮನವು ನಿನ್ನ ಬಗೆಗೆ ಹೀಗೆ
ಮರೆತರೂ ಮರೆಯಲಾಗದ ನೆನಪಿನ ಹಾಗೆ
ಕಂಡರೂ ವಾಸ್ತವಕೆ ಕಾಣದ ಕನಸಿನ ಹಾಗೆ
ನೀನೇಕೆ ಕಾಡುತಿರುವೆ ಕನಸಿನ ನನಪಲೂ ಹೀಗೆ
ಮುಂಜಾವಿನ ಸಮಯದಿ ನವಿಲು ಗರಿ ತೆರೆದು ಕುಣಿದ ಹಾಗೆ
ಮೂಸ್ಸಂಜೆಯಲಿ ಸೂರ್ಯನು ಸಾಗರವ ಅಪ್ಪುತ ಮುಳುಗಿದಾ ಹಾಗೆ
ಕಂಡೆನು ನಾ ಸಂತಸದ ಕ್ಷಣಗಳನು ಜೊತೆ ನಿ ಇರಲು ಸದಾ ಹೀಗೆ
ಶಿವಪ್ರಸಾದ ಮಿಣಜಿಗಿ