Thank you message


Saturday, 24 October 2015

ನಾಡ ಹಬ್ಬ ದಸರಾ ನೋಡೋಣ ಬಾರಣ್ಣ...

ನಾಡ ಹಬ್ಬ ದಸರಾ ನೋಡೋಣ ಬಾರಣ್ಣ 
ದಸರಾ ಗೊಂಬೆಗಳ ಜೊತೆ ಕುಣಿಯೋಣ ಬಾರಣ್ಣ 

ದಸರಾ ಸಡಗರ ನೋಡಲು ಎರಡು ಕಣ್ಣು ಸಾಲದಣ್ಣ 
ಅರಮನೆ ದೀಪಾಲಂಕಾರ ಕಣ್ಣತಳಿಸಿತು ನೋಡಣ್ಣ 
ತಾಯಿ ಚಾಮುಂಡಿಯ ಆಶೀರ್ವಾದ ಸದಾ ನಮ್ಮಮೇಲಿರಲಣ್ಣಾ 

ಆನೆ ಮೇಲೆ ಅಂಬಾರಿಯ ನೋಡುವುದೇ ಒಂದು ಭಾಗ್ಯವಣ್ಣ 
ದೇಶ ವೀದೆಶಿಗರ ಸೆಳೆಯುವ ದಸರಾ ನಮ್ಮದಣ್ಣ 
ಇಂತಹ ನಾಡಲಿ ಹುಟ್ಟಿರುಹುದು ನಮ್ಮೆಲ್ಲರ ಪುಣ್ಯವಣ್ಣ 

                                         ಶಿವಪ್ರಸಾದ ಮಿಣಜಿಗಿ