ಇಬ್ಬನಿ ಹನಿಗಳು ನಿನ್ನ ತುಟಿಯ ಮೇಲೆ ಸರಿದಾಡಿದ ಹಾಗೆ
ಪರದೆಯ ಸರಿಸಿ ಕದ್ದು ಕದ್ದು ನಿ ನನ್ನ ನೋಡಿದಾ ಹಾಗೆ
ಕಾಡಿದೆ ನಿನ್ನ ನೆನಪು ಮುಂಜಾವಿನ ಕನಸಲಿ ಹೀಗೆ
ಜಾತ್ರೆಯಲಿ ಕೈಹಿಡಿದು ನಾಲ್ಕು ಹೆಜ್ಜೆ ಹಾಕಿದಾ ಹಾಗೆ
ನೋಡಿದಲೆಲ್ಲ ನಿನ್ನ ಬಿಂಬವು ಕಣ್ಮುಂದೆ ಬಂದ ಹಾಗೆ
ಮೂಡಿದೆ ನಿನ್ನ ನೆನಪು ಮುಂಜಾವಿನ ಕನಸಲಿ ಹೀಗೆ
ದುಮ್ಮಿಕ್ಕಿ ಜಾರುವ ಚೆಲುವಿನ ಜೋಗದ ಹಾಗೆ
ದುಂಬಿಯು ಹೂವನು ಸ್ಪರ್ಶಿಸಿ ಚುಂಬಿಸಿದಾ ಹಾಗೆ
ಕಾಡಿದೆ ನಿನ್ನ ನೆನಪು ಕ್ಷಣ ಕ್ಷಣವೂ ಹೀಗೆ
ಶಿವಪ್ರಸಾದ ಮಿಣಜಿಗಿ