Thank you message


Saturday, 3 October 2015

ಸಾಗರದಾಚೆ ಕೂಗಳತೆ ದೂರದಲಿದೆ ಒಂದು ಮನೆ...

ಸಾಗರದಾಚೆ ಕೂಗಳತೆ ದೂರದಲಿದೆ ಒಂದು ಮನೆ 
ಇಹಲೋಕದಾಚೆ ಕೈತಾಗುವ ದೂರದಲಿದೆ ಸಣ್ಣ ಮನೆ 
ಅದುವೇ ನಮ್ಮೆಲ್ಲರ ಮನೆ ಸಾಟಿಯಿಲ್ಲದಾ ಮನೆ 

ಸುಖ ಸಂತೋಷದಿಂದ ಕೂಡಿದಾ ಮನೆ 
ಕಷ್ಟ ಬೇಸರಗಳಿಂದ ದೂರವಿರುವ ಮನೆ 
ಅದುವೇ ನಮ್ಮೆಲ್ಲರ ಮನೆ ಯಾರ ಹಂಗಿಲ್ಲದ ಮನೆ 

ಸಮಯದ ಅಭಾವ ವಿಲ್ಲದಾ ಮನೆ 
ನಿನ್ನ ಖುಷಿ ಸಂತಸಗಳಿಗೆ ಅಡ್ಡಿತರದಾ ಮನೆ 
ಅದುವೇ ನಮ್ಮೆಲ್ಲರ ಮನೆ ಸ್ವರ್ಗದಂತಿರುವ ಮನೆ 

                                  ಶಿವಪ್ರಸಾದ ಮಿಣಜಿಗಿ