Thank you message


Saturday, 19 September 2015

ಕರುಳಿನ ಬಳ್ಳಿಯೆ ಜೀವದಾತೆಯೇ ಓ ನನ್ನ ಅಮ್ಮ...

ಕರುಳಿನ ಬಳ್ಳಿಯೆ ಜೀವದಾತೆಯೇ ಓ ನನ್ನ ಅಮ್ಮ 
ಕಾಮಧೇನು ಕಲ್ಪರುಕ್ಷವೆ ಓ ಮುದ್ದು ಅಮ್ಮ 

ಕರುಣೆಗೂ ಮೀರಿದ ಕರುಣಾಮಯಿಯೆ 
ಮಮತೆಗೂ ಮೀರಿದ ಮಮತಾ ಮಾತೆಯೇ 
ಸಂಬಂಧಗಳಿಗೂ ಮೀರಿದ ಬಂಧದ ಕೊಂಡಿಯೇ 
ಓ ನನ್ನ ಅಮ್ಮ ಓ ಮುದ್ದು ಅಮ್ಮ 

ಚೈತನ್ಯ ತುಂಬುವ ಚಿಲುಮೆಯ ಕಾರಂಜಿಯೆ 
ಪ್ರೀತಿಯ ಧಾರೆಯ ಹರಿಸುವ ಮಹಾಸಾಗರಿಯೇ 
ಜೀವನದುದಕ್ಕು ದಾರಿತೋರುವ ದಾರಿ ದೀಪವೆ 
ಓ ನನ್ನ ಅಮ್ಮ ಓ ಮುದ್ದು ಅಮ್ಮ 

                                 ಶಿವಪ್ರಸಾದ ಮಿಣಜಿಗಿ