Thank you message


Saturday, 5 September 2015

ಮಳೆಯಾಕೆ ಬರುತಿದೆ ಪ್ರೀತಿ ಜ್ವರವ ತರುತಿದೆ...

ಮಳೆಯಾಕೆ ಬರುತಿದೆ ಪ್ರೀತಿ ಜ್ವರವ ತರುತಿದೆ 
ನಿನ್ನಯ ನೋಡಿದ ಘಳಿಗೆಯಲಿ ಪ್ರೀತಿಯ ಕಾಯಿಲೆ ಹಿಡಿಯುತಿದೆ 

ತಂಗಾಳಿಯು ಕಂಪಿಸಿ ಚುಂಬಿಸಿದೆ 
ಹೂವಲಿ ದುಂಬಿಯು ಕಂಗೊಳಿಸಿದೆ 
ಎದೆಯಗೂಡಲಿ ಹಕ್ಕಿ ಒಂದು ಪ್ರೇಮ ಕವಿತೆ ಹಾಡುತಿದೆ 

ಗಾಳಿ ಹೇಳಿದೆ ಕಿವಿಯಲಿ ಒಂದು ಪಿಸುಮಾತು 
ಹೃದಯದಲಿ ಉಳಿದಿದೆ ನೂರಾರು ಹಸಿಮಾತು 
ಕಿವಿಯಲಿ ಸದಾ ಗುಣುಗುತಿದೆ ನಿನ್ನದೇ ಮಾತು 

                                 ಶಿವಪ್ರಸಾದ ಮಿಣಜಿಗಿ