Thank you message


Saturday, 1 August 2015

ಕಾಡಿಗೆ ಕಣ್ಣುಗಳು ನೀಡಿವೆ ಕರೆಯೋಲೆ...

ಕಾಡಿಗೆ ಕಣ್ಣುಗಳು ನೀಡಿವೆ ಕರೆಯೋಲೆ 
ಕಣ್ಣೋಟ ಸೆಳೆಯುವ ಸುಂದರ ಕಿವಿಯೋಲೆ 
ನನ್ನ ಮನದ ಮಾತನು ಪಿಸುಗುಡುತ ನೀ ಹೇಳೆ 

ಅಂಬರ ಚುಂಬಿಸುವ ಹಕ್ಕಿಯ ಹಾರಾಟ 
ಕದ್ದು ಕದ್ದು ನೋಡುವ ಆ ನಿನ್ನ ಕಣ್ಣ ಓರೆ ನೋಟ 
ಹೃದಯದಿ ಮೂಡಿದೆ ನಿನ್ನ ಕಾಣುವ ಪರದಾಟ 

ಹೂವನು ಚುಂಬಿಸಿ ಮಕರಂದವ ಕದಿಯುವ 
ಕಲ್ಪನೆಗೆ ಕರೆದೊಯ್ಯುವ ಸಿಹಿಮುತ್ತನು ನೀಡುವ 
ಏಳು ಜನ್ಮಕು ಏಳೇಳು ಜನ್ಮಕೂ ನಾನೆಂದು ನಿನ್ನವ 

                                        ಶಿವಪ್ರಸಾದ ಮಿಣಜಿಗಿ