Thank you message


Saturday, 18 July 2015

ಬೆಳೆಯುವ ಪೈರನು ಮೊಟುಕಬೇಡ ಓ ಮನುಜ...

ಬೆಳೆಯುವ ಪೈರನು ಮೊಟುಕಬೇಡ ಓ ಮನುಜ 
ಇಷ್ಟಪಟ್ಟ ಹಾಗೆ ಬೆಳೆಯಲು ಬಿಡು ಅದನು ಓ ತನುಜ 

ಮನಸಿನ ಭಾವನೆಗಳ ಅರ್ಥೈಸುವ ಜೀವಿಯಾಗು 
ಮುಗ್ದ ಹೃದಯದ ಅಳಲನು ಅರಿಯುವ ಜನನಿಯಾಗು 
ನಿನ್ನ ಸ್ವಾರ್ಥಕೆ ಬೇರೆ ಮನಸನು ನೊಯಿಸದ ಕರುಣಾಮಯಿಯಾಗು 

ನಿನ್ನ ಸಂತಸದಿ ಬೇರೆಯವರ ವೇದನೆಯ ಮರೆಯದಿರು 
ಬೇರೆಯವರ ಸಂತಸವ ನೋಡಿ ನೀನೆಂದೂ ಕೊರುಗದಿರು
ಎಲ್ಲಾ ಜೀವಕು ಸ್ಪಂದಿಸುವ ಒಲವನು ನೀನೆಂದೂ ಬಿಡದಿರು 


                                                  ಶಿವಪ್ರಸಾದ ಮಿಣಜಿಗಿ